ಅಂದಿನ ಚಾಲುಕ್ಯರೇ! ಇಂದಿನ ವಹ್ನಿಕುಲ ಕ್ಷತ್ರಿಯರು

 

ಹೊಟ್ಟಲ್ ಶಾಸನ/ಪೊಟ್ಟಲ್ ಶಾಸನ
ನಾಂದೇಡ್ ಶಾಸನ/ನಂದಿಗ್ರಾಮ ಶಾಸನ

ದಕ್ಷಿಣ ಭಾರತವನ್ನು ಅತ್ಯಂತ ವೈಭವದಿಂದ ರಾಜ್ಯಭಾರ ಮಾಡಿದವರು ಕಲ್ಯಾಣ ಚಾಲುಕ್ಯರು.
ಚಾಲುಕ್ಯರ ಆಡಳಿತದ ಕಾಲವನ್ನು ಬಂಗಾರದ ಯುಗ ಎಂದು ಕರೆದಿದ್ದಾರೆ.
ರನ್ನ ಎಂಬ ಮಹಾಕವಿಗೆ ಪ್ರೋತ್ಸಾಹ & ಉತ್ತೇಜನವನ್ನು ನೀಡಿ ಅವರನ್ನು ಆಸ್ಥಾನದ ಕವಿಯಾಗಿ ಮಾಡಿದ್ದರು.
ಚಾಲುಕ್ಯರು ಕಲೆ, ವಾಸ್ತು ಶಿಲ್ಪ, ವಿದ್ಯೆಗೆ,ಹೆಚ್ಚಿನ ಪ್ರಾಶಸ್ತ್ಯ ವನ್ನು ನೀಡಿದ್ದರು.
ಚಾಲುಕ್ಯರ ಕಾಲದಲ್ಲಿ ಹೆಚ್ಚಾಗಿ ಕಲ್ಯಾಣಿಗಳು &ರೇಣುಕಾ ಯಲ್ಲಮ್ಮ, ಶಿವನ ದೇವಸ್ಥಾನಗಳನ್ನು ಹೆಚ್ಚಾಗಿ ನಿರ್ಮಾಣ ಮಾಡಿದ್ದಾರೆ.

ಚಾಲುಕ್ಯರ ಪ್ರಮುಖ ದೊರೆಗಳು
ಜಯಸಿಂಹ, ಸೋಮೇಶ್ವರ, ತ್ಯೆಲಪ,ಇಮ್ಮಡಿ ಪುಲಿಕೇಶಿ 

ಚಾಲುಕ್ಯರ ರಾಜ 
೨ನೇ ಸೋಮೇಶ್ವರನು ತಾವು "ವಹ್ನಿಕುಲ ಕ್ಷತ್ರಿಯ" /ವಹ್ನಿಕುಲ /ವನ್ನಿಕುಲ ಕ್ಷತ್ರಿಯ (Vahnikula/Vahnikula Kshatriya/Vannikula Kshatriya) ವಂಶಸ್ಥರೆಂದು 
11ನೇ ಶತಮಾನದಲ್ಲಿ ಮಹಾರಾಷ್ಟ್ರದ ನಾಂದೇಡ ಜಿಲ್ಲೆಗೆ ಸೇರುವ ಹೊಟ್ಟಲ್ ಗ್ರಾಮದ ಸಿದ್ದೇಶ್ವರ ಮಂದಿರದ 
ಕಲ್ಲಿನ ಶಾಸನಗಳಲ್ಲಿ ಕೆತ್ತನೆ ಮಾಡಿಸಿದ್ದಾರೆ.
ಹೊಟ್ಟಲ್ ಗ್ರಾಮವು ಮಹಾರಾಷ್ಟ್ರ, ಕರ್ನಾಟಕ,
ಆಂದ್ರ ಪ್ರದೇಶ ರಾಜ್ಯಗಳ ಗಡಿ ಪ್ರದೇಶದಲ್ಲಿದೆ.
ಹೊಟ್ಟಲ್ ಗ್ರಾಮದ ಹಿಂದಿನ ಹೆಸರು ಪೊಟ್ಟಲ್ 
ಈ ಗ್ರಾಮವು ಮಹಾರಾಷ್ಟ್ರ  ರಾಜ್ಯದ,ನಾಂದೇಡ್ ಜಿಲ್ಲೆ ,ದೇಗ್ಲೂರ್ ತಾಲ್ಲೂಕಿನಲ್ಲಿದೆ.
ನಾಂದೇಡ್ ಜಿಲ್ಲೆಯ ಹಿಂದಿನ ಹೆಸರು ನಂದಿಗ್ರಾಮ.



ಹೊಟ್ಟಲ್ ಶಾಸನದ ಸಾರಾಂಶ 

 ಚಾಲುಕ್ಯ ಮಹಾರಾಜ ಸೋಮೇಶ್ವರ-II (1068-76) ಶಾಸನವು ಅತ್ಯಂತ ಪುರಾತನದಾಗಿದೆ ಮತ್ತು ಇದು ವಂಜಾರಾ ನದಿಯ ದಡದಲ್ಲಿರುವ ಅಗಸ್ತ್ಯ ಋಷಿ ಮುನಿಗಳ ಆಶ್ರಮವನ್ನು ಕುರಿತು ವಿವರಿಸಿದ್ದಾರೆ.
 ಹೊಟ್ಟಲ್ ಶಾಸನವು ಚಾಲುಕ್ಯ ವಂಶದ ಉದಯದ ಬಗ್ಗೆ ಹೇಳುತ್ತದೆ. 
 ಮಹಾರಾಜ ಧೋರ್, ಅವರ ಮಕ್ಕಳಾದ ಉತ್ತಮ, ಕಲಿಚೋರ್ ಮತ್ತು ಅರ್ಗಾ ಅವರ ವಂಶದ ಬಗ್ಗೆ ವಿವರಣೆ ನೀಡುತ್ತದೆ, ಅವರೆಲ್ಲಾರು ವಹ್ನಿಕುಲ ಕ್ಷತ್ರಿಯ /ವಹ್ನಿಕುಲ /ವನ್ಹಿಕುಲ /ವನ್ನಿಕುಲ ಕ್ಷತ್ರಿಯ /ಅಗ್ನಿಕುಲ ಕ್ಷತ್ರಿಯ ವಂಶಕ್ಕೆ ಸೇರಿದವರು  ಎಂದು ಹೊಟ್ಟಲ್ ಶಾಸನ ತಿಳಿಸುತ್ತದೆ.


ಲೇಖಕರು:
ಜಕ್ಕಸಂದ್ರ ನಂಜಪ್ಪ 
Jakkasandra Nanjappa 

Comments

Popular posts from this blog

ಕರ್ನಾಟಕ ರಾಜ್ಯ ಸರ್ಕಾರದ 2025 ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿಯನ್ನು ವನ್ನಿಕುಲ ಕ್ಷತ್ರಿಯ -ವಹ್ನಿಕುಲ ಕ್ಷತ್ರಿಯ & ಜಾತಿ ಸಂಖ್ಯೆ 1508 ಎಂದು ನಮೂದಿಸಿ

ಕರ್ನಾಟಕ ರಾಜ್ಯ ತಿಗಳ ಅಭಿವೃದ್ಧಿ ನಿಗಮ ಸ್ಥಾಪನೆಗೆ ಹಸಿರು ನಿಶಾನೆ

ಕರ್ನಾಟಕ ರಾಜ್ಯ ಸರ್ಕಾರವು ಕರಗ ಉತ್ಸವ ನಡೆಸುವ ವಹ್ನಿಕುಲ ಕ್ಷತ್ರಿಯ ಸಂಘ-ಸಂಸ್ಥೆಗಳಿಗೆ ಅನುದಾನ ಮಂಜೂರು ಮಾಡಿದೆ