ಕರ್ನಾಟಕ ರಾಜ್ಯ ಸರ್ಕಾರವು ಕರಗ ಉತ್ಸವ ನಡೆಸುವ ವಹ್ನಿಕುಲ ಕ್ಷತ್ರಿಯ ಸಂಘ-ಸಂಸ್ಥೆಗಳಿಗೆ ಅನುದಾನ ಮಂಜೂರು ಮಾಡಿದೆ
ಕರಗ ಉತ್ಸವ ನಡೆಸುವ ವಹ್ನಿಕುಲ ಕ್ಷತ್ರಿಯ ಜನಾಂಗದವರಲ್ಲಿ ವಿನಂತಿ. ಮಾನ್ಯರೇ ಸರ್ಕಾರದ ಆದೇಶ ಸಂಖ್ಯೆ ಕಸಂವಾ-82, ಕಸಧ-2024 ದಿನಾಂಕ -15/03/2024 ಕರ್ನಾಟಕ ರಾಜ್ಯ ಸರ್ಕಾರವು ,2023-24 ನೇ ಸಾಲಿನಲ್ಲಿ ಕರಗ ಮಹೋತ್ಸವ ನಡೆಸುವ ಸಂಘ-ಸಂಸ್ಥೆಗಳಿಗೆ ಎ- ವರ್ಗಕ್ಕೆ -3 ಲಕ್ಷ ಬಿ- ವರ್ಗಕ್ಕೆ -2.25 ಲಕ್ಷ ಸಿ-ವರ್ಗಕ್ಕೆ -1.5 ಲಕ್ಷ ರೂಗಳನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ. ಎಲ್ಲಾ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿದ್ದವರಿಗೆ ಅತಿ ಶೀಘ್ರದಲ್ಲಿ ಅನುದಾನದ ಹಣವನ್ನು ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ನೀಡಲಾಗುತ್ತದೆ. ಇದುವರೆಗೆ ಅರ್ಜಿಯನ್ನು ಸಲ್ಲಿಸದವರು ಈ ಕೂಡಲೇ ಆಯಾ ಜಿಲ್ಲೆಯ ಕನ್ನಡ ಸಂಸ್ಕೃತಿ ಇಲಾಖೆಗೆ ಸೂಕ್ತ ದಾಖಲೆಗಳನ್ನು ನೀಡಿ ಅನುದಾನದ ಹಣವನ್ನು ಪಡೆಯತಕ್ಕದ್ದು. ಧನ್ಯವಾದಗಳು. #ಜಕ್ಕಸಂದ್ರ_ನಂಜಪ್ಪ #jakkasandra_nanjappa