Posts

ಕರ್ನಾಟಕ ರಾಜ್ಯ ಸರ್ಕಾರದ 2025 ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿಯನ್ನು ವನ್ನಿಕುಲ ಕ್ಷತ್ರಿಯ -ವಹ್ನಿಕುಲ ಕ್ಷತ್ರಿಯ & ಜಾತಿ ಸಂಖ್ಯೆ 1508 ಎಂದು ನಮೂದಿಸಿ

Image
ಓಂ ಗಂ ಗಣಪತಯೇ ನಮಃ ಗುರುಭ್ಯೋ ನಮಃ  ವಹ್ನಿಕುಲ ಕ್ಷತ್ರಿಯ ಗುರುಪೀಠ ಶ್ರೀ ಆದಿಶಕ್ತಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಜಗದ್ಗುರುಗಳಾದ   ಪರಮಪೂಜ್ಯ ಶ್ರೀ ಶ್ರೀ ಶ್ರೀ ಪ್ರಣವಾನಂದಪುರಿ ಮಹಾಸ್ವಾಮಿಗಳ ಹಾಗೂ ರಾಜ್ಯಮಟ್ಟದ ವಹ್ನಿಕುಲ ಕ್ಷತ್ರಿಯ ಜನಾಂಗದ ಮುಖಂಡರು ಹಾಗೂ ಯುವಕರು ನಿರ್ಧಾರ ಮಾಡಿರುವ ಪ್ರಕಾರ   ಕರ್ನಾಟಕ ರಾಜ್ಯ ಸರ್ಕಾರದ 2025 ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ/ಜಾತಿ ಸಮೀಕ್ಷೆ ಆರಂಭಗೊಳ್ಳಲಿದೆ‌.  ಈ ಕೆಳಕಂಡ 60 ಪ್ರಶ್ನೆಗಳಿಗೆ ಉತ್ತರಿಸುವುದು ಕಡ್ಡಾಯವಾಗಿದೆ ಎಂದು ಹೇಳಲಾಗುತ್ತಿದೆ. ಆ ಪ್ರಶ್ನೆಗಳು ಈ ಕೆಳಕಂಡಂತೆ ಇವೆ. ಮನೆಯ ಮುಖ್ಯಸ್ಥರ ಹೆಸರು ತಂದೆಯ ಹೆಸರು ತಾಯಿಯ ಹೆಸರು ಕುಟುಂಬದ ಕುಲಹೆಸರು ಮನೆ ವಿಳಾಸ ಮೊಬೈಲ್ ಸಂಖ್ಯೆ ರೇಷನ್ ಕಾರ್ಡ್ ಸಂಖ್ಯೆ ಆದಾರ್ ಸಂಖ್ಯೆ ಮತದಾರರ ಗುರುತಿನ ಚೀಟಿ ಸಂಖ್ಯೆ ಕುಟುಂಬದ ಒಟ್ಟು ಸದಸ್ಯರು. ಧರ್ಮ -ಹಿಂದೂ ಜಾತಿಯ ಸಂಖ್ಯೆ - 1508   ಜಾತಿ -ವನ್ನಿಕುಲ/ವಹ್ನಿಕುಲ ಕ್ಷತ್ರಿಯ  ಜಾತಿಯ ಸಮಾನವಾದ ಹೆಸರು -ವನ್ನಿಕುಲ ಕ್ಷತ್ರಿಯ  ಉಪಜಾತಿ-  ವನ್ನಿಕುಲ/ವನ್ನಿಕುಲ ಕ್ಷತ್ರಿಯ, ವಹ್ನಿಕುಲ, ವನ್ನಿಯಾರ್ ,ವನ್ನೇಕಾಪು, ತಿಗಳ,ಧರ್ಮರಾಜ ಕಾಪು, ಧರ್ಮರಾಯ ಒಕ್ಕಲಿಗ,ಅಗ್ನಿವನ್ನಿ, ಅರಸು ವನ್ನಿಯಾರ್ , ಪಳ್ಳಿ ರೆಡ್ಡಿ ,ಪಡೆಯಾಚಿ ಗೌಡ, ಪಡೆಯಾಚಿ ಗೌಂಡರು,ಪಳ್ಳಿ , ಪಳ್ಳಿಗರು,ವನ್ನೇರು, ವನ್ನಿಯಾ ಕುಲ ಕ್ಷತ್ರಿಯ, ಅಗ್ನಿಕುಲ ಕ್ಷತ್ರಿ...

ಕರ್ನಾಟಕ ರಾಜ್ಯ ತಿಗಳ ಅಭಿವೃದ್ಧಿ ನಿಗಮ ಸ್ಥಾಪನೆಗೆ ಹಸಿರು ನಿಶಾನೆ

Image
ಕರ್ನಾಟಕ ತಿಗಳ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆಗೆ ಹಸಿರು ನಿಶಾನೆ  Karnataka state thigala community development corporation     (ತಿಗಳ,ವನ್ನಿಕುಲ ಕ್ಷತ್ರಿಯ/ವಹ್ನಿಕುಲ ಕ್ಷತ್ರಿಯ, ಪಲ್ಲಿ-ಪಳ್ಳಿ, ಅಗ್ನಿ ವಂಶ, ಅಗ್ನಿಕುಲ ಕ್ಷತ್ರಿಯ, ಅಗ್ನಿ ವನ್ನಿ, ವನ್ನಿಯಾರ್ ,ಶಂಭುಕುಲ ಕ್ಷತ್ರಿಯ, ಧರ್ಮರಾಜು ಕಾಪು,ತಿಗ್ಲರ್,ಕುರೋವನ್) ಕರ್ನಾಟಕ ರಾಜ್ಯ ತಿಗಳ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಖ್ಯ ಕಾರಣಿಭೂತರಾದ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ  ಶ್ರೀ ಸಿದ್ದರಾಮಯ್ಯ ರವರಿಗೆ  ಉಪ ಮುಖ್ಯಮಂತ್ರಿಗಳಾದ  ಶ್ರೀ ಡಿ. ಕೆ. ಶಿವಕುಮಾರ್ ರವರಿಗೆ  ಸಾರಿಗೆ & ಮುಜರಾಯಿ ಇಲಾಖೆ ಸಚಿವರಾದ  ಶ್ರೀ ರಾಮಲಿಂಗರೆಡ್ಡಿ ಅಣ್ಣಾ ರವರಿಗೆ  ವನ್ನಿಕುಲ ಕ್ಷತ್ರಿಯ-ವಹ್ನಿಕುಲ ಕ್ಷತ್ರಿಯ ಜನಾಂಗದ ಮುಖಂಡರು  ಹಾಗೂ ಮಾಜಿ ಮೇಯರ್ & ಮಾಜಿ ವಿಧಾನ ಪರಿಷತ್ತು ಸದಸ್ಯರಾದ  ಶ್ರೀ ಪಿ. ಆರ್. ರಮೇಶ್ ಅಣ್ಣಾ ರವರಿಗೆ ಹಾಗೂ ಜನಾಂಗದ ಸಮಸ್ತ ಮುಖಂಡರಿಗೂ  ಹೃದಯ ಪೂರ್ವಕ ಅಭಿನಂದನೆಗಳು ಪ್ರಕಟಣೆ  J.Nanjappa (Jakkasandra Nanjappa) J ನಂಜಪ್ಪ (ಜಕ್ಕಸಂದ್ರ ನಂಜಪ್ಪ) ವನ್ನಿಕುಲ ಕ್ಷತ್ರಿಯ -ವಹ್ನಿಕುಲ ಕ್ಷತ್ರಿಯ ಜನಾಂಗದ ಮುಖಂಡರು & ಸಂಶೋಧಕರು,

ಕರ್ನಾಟಕ ರಾಜ್ಯ ಸರ್ಕಾರವು ಕರಗ ಉತ್ಸವ ನಡೆಸುವ ವಹ್ನಿಕುಲ ಕ್ಷತ್ರಿಯ ಸಂಘ-ಸಂಸ್ಥೆಗಳಿಗೆ ಅನುದಾನ ಮಂಜೂರು ಮಾಡಿದೆ

Image
ಕರಗ ಉತ್ಸವ ನಡೆಸುವ ವಹ್ನಿಕುಲ ಕ್ಷತ್ರಿಯ ಜನಾಂಗದವರಲ್ಲಿ ವಿನಂತಿ. ಮಾನ್ಯರೇ  ಸರ್ಕಾರದ ಆದೇಶ ಸಂಖ್ಯೆ  ಕಸಂವಾ-82, ಕಸಧ-2024 ದಿನಾಂಕ -15/03/2024 ಕರ್ನಾಟಕ ರಾಜ್ಯ ಸರ್ಕಾರವು ,2023-24 ನೇ ಸಾಲಿನಲ್ಲಿ ಕರಗ ಮಹೋತ್ಸವ ನಡೆಸುವ ಸಂಘ-ಸಂಸ್ಥೆಗಳಿಗೆ ಎ- ವರ್ಗಕ್ಕೆ -3 ಲಕ್ಷ ಬಿ- ವರ್ಗಕ್ಕೆ -2.25 ಲಕ್ಷ ಸಿ-ವರ್ಗಕ್ಕೆ -1.5 ಲಕ್ಷ ರೂಗಳನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ. ಎಲ್ಲಾ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿದ್ದವರಿಗೆ ಅತಿ ಶೀಘ್ರದಲ್ಲಿ ಅನುದಾನದ ಹಣವನ್ನು ಕನ್ನಡ ಸಂಸ್ಕೃತಿ ಇಲಾಖೆ ಮೂಲಕ ನೀಡಲಾಗುತ್ತದೆ. ಇದುವರೆಗೆ ಅರ್ಜಿಯನ್ನು ಸಲ್ಲಿಸದವರು ಈ ಕೂಡಲೇ ಆಯಾ ಜಿಲ್ಲೆಯ ಕನ್ನಡ ಸಂಸ್ಕೃತಿ ಇಲಾಖೆಗೆ ಸೂಕ್ತ ದಾಖಲೆಗಳನ್ನು ನೀಡಿ ಅನುದಾನದ ಹಣವನ್ನು ಪಡೆಯತಕ್ಕದ್ದು. ಧನ್ಯವಾದಗಳು. #ಜಕ್ಕಸಂದ್ರ_ನಂಜಪ್ಪ #jakkasandra_nanjappa

ಅಂದಿನ ಚಾಲುಕ್ಯರೇ! ಇಂದಿನ ವಹ್ನಿಕುಲ ಕ್ಷತ್ರಿಯರು

Image
  ಹೊಟ್ಟಲ್ ಶಾಸನ/ಪೊಟ್ಟಲ್ ಶಾಸನ ನಾಂದೇಡ್ ಶಾಸನ/ನಂದಿಗ್ರಾಮ ಶಾಸನ ದಕ್ಷಿಣ ಭಾರತವನ್ನು ಅತ್ಯಂತ ವೈಭವದಿಂದ ರಾಜ್ಯಭಾರ ಮಾಡಿದವರು ಕಲ್ಯಾಣ ಚಾಲುಕ್ಯರು. ಚಾಲುಕ್ಯರ ಆಡಳಿತದ ಕಾಲವನ್ನು ಬಂಗಾರದ ಯುಗ ಎಂದು ಕರೆದಿದ್ದಾರೆ. ರನ್ನ ಎಂಬ ಮಹಾಕವಿಗೆ ಪ್ರೋತ್ಸಾಹ & ಉತ್ತೇಜನವನ್ನು ನೀಡಿ ಅವರನ್ನು ಆಸ್ಥಾನದ ಕವಿಯಾಗಿ ಮಾಡಿದ್ದರು. ಚಾಲುಕ್ಯರು ಕಲೆ, ವಾಸ್ತು ಶಿಲ್ಪ, ವಿದ್ಯೆಗೆ,ಹೆಚ್ಚಿನ ಪ್ರಾಶಸ್ತ್ಯ ವನ್ನು ನೀಡಿದ್ದರು. ಚಾಲುಕ್ಯರ ಕಾಲದಲ್ಲಿ ಹೆಚ್ಚಾಗಿ ಕಲ್ಯಾಣಿಗಳು &ರೇಣುಕಾ ಯಲ್ಲಮ್ಮ, ಶಿವನ ದೇವಸ್ಥಾನಗಳನ್ನು ಹೆಚ್ಚಾಗಿ ನಿರ್ಮಾಣ ಮಾಡಿದ್ದಾರೆ. ಚಾಲುಕ್ಯರ ಪ್ರಮುಖ ದೊರೆಗಳು ಜಯಸಿಂಹ, ಸೋಮೇಶ್ವರ, ತ್ಯೆಲಪ,ಇಮ್ಮಡಿ ಪುಲಿಕೇಶಿ  ಚಾಲುಕ್ಯರ ರಾಜ  ೨ನೇ ಸೋಮೇಶ್ವರನು ತಾವು "ವಹ್ನಿಕುಲ ಕ್ಷತ್ರಿಯ" /ವಹ್ನಿಕುಲ /ವನ್ನಿಕುಲ ಕ್ಷತ್ರಿಯ (Vahnikula/Vahnikula Kshatriya/Vannikula Kshatriya) ವಂಶಸ್ಥರೆಂದು  11ನೇ ಶತಮಾನದಲ್ಲಿ ಮಹಾರಾಷ್ಟ್ರದ ನಾಂದೇಡ ಜಿಲ್ಲೆಗೆ ಸೇರುವ ಹೊಟ್ಟಲ್ ಗ್ರಾಮದ ಸಿದ್ದೇಶ್ವರ ಮಂದಿರದ  ಕಲ್ಲಿನ ಶಾಸನಗಳಲ್ಲಿ ಕೆತ್ತನೆ ಮಾಡಿಸಿದ್ದಾರೆ. ಹೊಟ್ಟಲ್ ಗ್ರಾಮವು ಮಹಾರಾಷ್ಟ್ರ, ಕರ್ನಾಟಕ, ಆಂದ್ರ ಪ್ರದೇಶ ರಾಜ್ಯಗಳ ಗಡಿ ಪ್ರದೇಶದಲ್ಲಿದೆ. ಹೊಟ್ಟಲ್ ಗ್ರಾಮದ ಹಿಂದಿನ ಹೆಸರು ಪೊಟ್ಟಲ್  ಈ ಗ್ರಾಮವು ಮಹಾರಾಷ್ಟ್ರ  ರಾಜ್ಯದ,ನಾಂದೇಡ್ ಜಿಲ್ಲೆ ,ದೇಗ್ಲೂರ್ ತಾಲ್ಲೂಕಿನಲ್ಲ...